Kud Domain Overview🔒 SSL VerifiedWelcome to the detailed analysis for kud.ac.in. This domain is officially recognized as ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ. According to their official web presence, their primary focus is: "Detailed SEO and authority metrics for kud.ac.in. Kud currently holds an estimated domain authority score of 87/100 in the .IN namespace based on our global index mapping.".
"ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಬಾಂಬೆ ಶಾಸಕಾಂಗವು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ ೧೯೪೯ ರ ಮೂಲಕ ಕರ್ನಾಟಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು. ಇದು ಮಾರ್ಚ ೧, ೧೯೫೦ ರಂದು ಶಾಸನಬದ್ಧ ವಿಶ್ವವಿದ್ಯಾಲಯವಾಯಿತು. ವಿಶ್ವವಿದ್ಯಾಲಯದ ಆಡಳಿತ ವ್ಯಾಪ್ತಿಯು ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ. ಇದು ಹಲವು ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. ವಿಶ್ವವಿದ್ಯಾಲಯವು ೮೮೮ ಎಕರೆಗಳಷ್ಟು ಭೂವ್ಯಾಪ್ತಿಯನ್ನು ಹೊಂದಿದ್ದು, ಕಲೆ, ವಾಣಿಜ್ಯ, ಶಿಕ್ಷಣ, ಕಾನೂನು, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಮಾಜವಿಜ್ಞಾನ ನಿಕಾಯಗಳಲ್ಲಿ ಕೋರ್ಸಗಳನ್ನು ನೀಡುತ್ತಿದೆ. ವಿಶ್ವವಿದ್ಯಾಲಯದ ‘ಕಾಣ್ಕೆ’ ಮತ್ತು ‘ಉದ್ದಿಷ್ಟಧ್ಯೇಯ’ದ ಸಂಕೇತವಾಗಿ ವಿಶ್ವವಿದ್ಯಾಲಯದ ಲಾಂಛನವು ಮಧ್ಯದಲ್ಲಿ ಆಲದಮರ, ತೆರೆದಪುಸ್ತಕ, ಬಸವ, ಆನೆ, ಉದಯಿಸುತ್ತಿರುವ ಸೂರ್ಯ ಚಿತ್ರಗಳು ಲೋಕಜ್ಞಾನವನ್ನು ಅನಾವರಣಗೊಳಿಸುವ ‘ಅರಿವೇ ಗುರು’ ಘೋಷವಾಕ್ಯದ ಮೂಲಕ ಬಿಂಬಿತವಾಗಿದ್ದು, ಜ್ಞಾನ, ವಿವೇಕ ಮತ್ತು ಬುದ್ದಿವಂತಿಕೆಗಳು ಆಲದಮರದಂತೆ ಎಲ್ಲೆಡೆ ವ್ಯಾಪಿಸಿ ಜಗತ್ತನ್ನು ಬೆಳೆಗುವುದರೊಂದಿಗೆ ಅನಕ್ಷರತೆಯನ್ನು ನಿರ್ಮೂಲನೆ ಮಾಡಬೇಕೆನ್ನುವುದನ್ನು ಸೂಚಿಸುತ್ತದೆ."
"ಪ್ರಸ್ತುತ ವಿಶ್ವವಿದ್ಯಾಲಯದಲ್ಲಿನ ೫೧ ಸ್ನಾತಕೋತ್ತರ ವಿಭಾಗಗಳಲ್ಲಿ ೧೫೪ ಶಿಕ್ಷಕರು ಸೇವೆಯಲ್ಲಿದ್ದು, ಸ್ನಾತಕೋತ್ತರ, ಎಂ.ಫಿಲ್., ಪಿಎಚ್.ಡಿ, ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ ಸೇರಿ ಸುಮಾರು ೪೫೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಒಟ್ಟಾರೆ ಸಂಖ್ಯೆಯಲ್ಲಿ ೪೭% ಪ್ರತಿಶತ ವಿದ್ಯಾರ್ಥಿನಿಯರಿದ್ದು, ೬% ಪ್ರತಿಶತ ಹೊರರಾಜ್ಯದ ವಿದ್ಯಾರ್ಥಿಗಳಿದ್ದಾರೆ. ಸಾಮಾಜಿಕ ಹೊರಗಿಡುವಿಕೆಯನ್ನು ತೊಡೆದುಹಾಕಲು ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು, ರಾಜ್ಯ ಸರ್ಕಾರದ ನೀತಿಗೆ ಅನುಗುಣವಾಗಿ ಎಸ್ಸಿ/ಎಸ್ಟಿ, ಪ್ರವರ್ಗ-೧, ಅಲ್ಪಸಂಖ್ಯಾತರು, ಮತ್ತು ಓಬಿಸಿ ವರ್ಗಗಳಿಗೆ ಸೀಟುಗಳನ್ನು ಕಾಯ್ದಿರಿಸಲಾಗಿದೆ. ಮಾಜಿ ಸೈನಿಕರು, ಸ್ವಾತಂತ್ರö್ಯ ಹೋರಾಟಗಾರರು, ವಿಶೇಷ ಚೇತನರು ಮತ್ತು ಕ್ರೀಡಾಪಟುಗಳ ಮಕ್ಕಳಿಗೆ ತಲಾ ಒಂದು ಸೀಟು ಕಾಯ್ದಿರಿಸಲಾಗಿದೆ. ೧೯೬೪ ರಿಂದ ವಿಶ್ವವಿದ್ಯಾನಿಲಯವು ತನ್ನದೇ ಆದ ಪ್ರೌಢಶಾಲೆ (ಯುನಿವರ್ಸಿಟಿ ಪಬ್ಲಿಕ್ ಸ್ಕೂಲ)ಯನ್ನು ಹೊಂದಿದ್ದು, ಇದು ಕರ್ನಾಟಕ ವಿಶ್ವವಿದ್ಯಾನಿಲಯದ ಬಿ.ಎಡ್. ಕಾಲೇಜಿನ ಅಭ್ಯಾಸದ ಅವಶ್ಯಕತೆಗಳನ್ನು ಪೂರೈಸುತ್ತದೆ."
"ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ಕಲೆ, ವಾಣಿಜ್ಯ, ಸಂಗೀತ ಮತ್ತು ಲಲಿತಕಲೆಗಳು, ಕಾನೂನು ಮತ್ತು ಶಿಕ್ಷಣದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳನ್ನು ನೀಡುತ್ತಿರುವ ೫ ಸಂಲಗ್ನ ಕಾಲೇಜುಗಳಿವೆ. ವೃತ್ತಿ ನಿರತ ಮಹಿಳಾ ವಸತಿನಿಲಯ ಮತ್ತು ಮಹಿಳಾ ವಸತಿನಿಲಯಗಳು ಸೇರಿದಂತೆ ಒಟ್ಟು ೨೧ ವಸತಿನಿಲಯಗಳಿವೆ. ಇವು ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳ ಸುಮಾರು ೨೬೦೦ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯವನ್ನು ಒದಗಿಸುತ್ತವೆ. ಕಳೆದ ೭೦ ವರ್ಷಗಳಲ್ಲಿ ಸಂಯೋಜಿತ ಕಾಲೇಜುಗಳ ಸಂಖ್ಯೆ ಕೇವಲ ೩೪ ಇದ್ದದ್ದು ೨೫೦ ಕ್ಕಿಂತ ಹೆಚ್ಚಾಗಿದೆ.."
"ವಿಶ್ವವಿದ್ಯಾನಿಲಯವು ಗದಗ ಮತ್ತು ಕಾರವಾರ ಜಿಲ್ಲಾ ಕೇಂದ್ರಗಳಲ್ಲಿ ಅನುಕ್ರಮವಾಗಿ ೩೨ ಮತ್ತು ೦೬ ಎಕರೆ ಭೂವಿಸ್ತೀರ್ಣಗಳುಳ್ಳ 02 ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. ಎಲ್ಲಾ ಕ್ಯಾಂಪಸ್ಗಳು ಸ್ವಾವಲಂಬಿಯಾಗಿದ್ದು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. ಅವು ಸ್ಥಳೀಯ ಜನರ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ವಿಶೇಷ ಅಧ್ಯಯನಗಳನ್ನು ಉತ್ತೇಜಿಸುತ್ತವೆ. ಉದಾಹರಣೆಗೆ, ಪಲ್ಪ ಮತ್ತು ಪೇಪರ ತಂತ್ರಜ್ಞಾನದ ಕೋರ್ಸನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವೆಸ್ಟ ಕೋಸ್ಟ ಪೇಪರ ಮಿಲ್ ಆವರಣದಿಂದ ನಡೆಸಲಾಗುತ್ತದೆ. ವಿಶ್ವವಿದ್ಯಾನಿಲಯವು ೫೦ ಸ್ನಾತಕೋತ್ತರ ಕೋರ್ಸುಗಳು, ೦೪ ಅಡ್ವಾನ್ಸ ಡಿಪ್ಲೋಮಾಗಳು, ೨೮ ಡಿಪ್ಲೋಮಾಗಳು, ೧೧ ಸರ್ಟಿಫಿಕೇಟ ಕೋರ್ಸಗಳು ಮತ್ತು ೪೨ ಪಿಎಚ್.ಡಿ. ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ವ್ಯಾಪಕ ಆಯ್ಕೆಗಳನ್ನು ಒದಗಿಸುತ್ತದೆ. ಹೆಚ್ಚಿನ ವಿಭಾಗಗಳು ಉದಯೋನ್ಮುಖ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವಲ್ಲಿ ಅಂತರಶಿಸ್ತೀಯ ಘಟಕಗಳನ್ನು ಅಳವಡಿಸಿಕೊಳ್ಳುತ್ತಿವೆ."
By comparing kud.ac.in to other leading websites in its niche, marketers and researchers can identify key traffic sources and growth opportunities. Explore our related resources below to find websites similar to kud.ac.in.
Yes, according to our latest analysis, we detected a valid SSL certificate ensuring a secure connection.
As of September 7, 2026, kud.ac.in holds an estimated domain authority score of 77/100 based on our VisitRank tracking algorithms.
You can find the best alternatives and similar sites to kud.ac.in in our explore section, which includes competitors in the E-commerce & Retail sector.
Common Misspellings & Typo Domains for kud.ac.in: